ನಡೆಯುವ ಸಂಸ್ಕಾರಗಳು

ಸೀಮಂತೋನ್ನಯನ :

ವಿವಾಹಿತ ಕನ್ಯೆ ಮೊದಲ ಬಾರಿಗೆ ಗರ್ಭಿಣಿಯಾದಾಗ ಗರ್ಭಕ್ಕೆ ಕೊಡುವ ಸಂಸ್ಕಾರವಿದು. ಈ ದೃಷ್ಟಿಯಿಂದ ಶಾಸ್ತ್ರೋಕ್ತ ರೀತ್ಯಾ ಈ ಸಂಸ್ಕಾರವನ್ನು ಇಲ್ಲಿ ನಡೆಸಿಕೊಡಲಾಗುವುದು.

ಅನ್ನಪ್ರಾಶನ :

ಮಗು ಜನಿಸಿದ ಮೇಲೆ ಮೊದಲ ಬಾರಿಗೆ ಅನ್ನವನ್ನು (ದಕ್ಷಿಣ ಕನ್ನಡದಲ್ಲಿ ಅಕ್ಕಿಯ ಅನ್ನ) ನೀಡುವ ಸಂಸ್ಕಾರವನ್ನು ಹವನಪೂರ್ವಕ ಮಾಡಲು ಸುಜ್ಞಾನ ಮಂದಿರದಲ್ಲಿ ಅವಕಾಶವಿದೆ.

ಉಪನಯನ :

ಸಂಸ್ಕಾರಗಳಲ್ಲಿ ದ್ವಿಜತ್ವವನ್ನು ಕೊಡುವ ವಿಶಿಷ್ಟ ಸಂಸ್ಕಾರವಿದು. ಉಪನಯನ, ಬ್ರಹ್ಮೋಪದೇಶ, ಮುಂಜಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಈ ಸಂಸ್ಕಾರ ಬ್ರಾಹ್ಮಣರಿಗೆ ನಡೆಯುತ್ತದೆ. ವೇದಾಧ್ಯಯನಕ್ಕೆ ಅಧಿಕಾರಿಯಾಗಲು ಈ ಸಂಸ್ಕಾರ ಅನಿವಾರ್ಯ. ಇಂದಿನ ಕಲುಷಿತ ವಾತಾವರಣ ಶುದ್ಧಿಯಾಗಲು ಶ್ರೀಮನ್ನಾರಾಯಣನ ಬಳಿ ತೆರಳಲು ಈ ಸಂಸ್ಕಾರ ಅನಿವಾರ್ಯಾ. ಕುಕ್ಕೇ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಉಪನಯನ ಸಂಸ್ಕಾರಕ್ಕೆ ವಿಶೇಷ ಅರ್ಥವಿದೆ. ಆತ ಜ್ಞಾನಶಕ್ತಿಯೂ ಆಗಿರುವುದರಿಂದ ಸುಜ್ಞಾನದಲ್ಲಿ ವಿಶೇಷವಿದೆ.

ವಿವಾಹ :

ಕ್ಷೇತ್ರಗಳಲ್ಲಿ ವಿವಾಹಾದಿಗಳು ಹೆಚ್ಚು ಅರ್ಥಪೂರ್ಣ. ಅಗ್ನಿಸಾಕ್ಷಿಯಾಗಿ, ಭಗವಂತನ ಸಾಕ್ಷಿಯಾಗಿ ಈ ಪವಿತ್ರಬಂಧ ನಡೆಯಬೇಕಾಗಿರುವುದರಿಂದ ಇಲ್ಲಿ ಇದನ್ನು ಯಥೋಚಿತವಾಗಿ ನಡೆಸಲಾಗುತ್ತದೆ. ಪ್ರಸ್ತುತ ಸುಮಾರು 250 ಜನರಿಗೆ ಯೋಗ್ಯವಾದ ವ್ಯವಸ್ಥೆ ಮಾತ್ರ ಇರುತ್ತದೆ.

ಯಜ್ಞಗಳು :

ಪೂಜೆ, ಹೋಮ-ಹವನಾದಿಗಳು ವೈಯಕ್ತಿಕ - ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಗಾಗಿ ಇಲ್ಲಿ ಯಜ್ಞಗಳನ್ನು ನಡೆಸಲಾಗುತ್ತದೆ. ಯಜೇತಾ ಸ್ವರ್ಗಕಾಮ ಅಂದರೆ ಯಜ್ಞದಿಂದ ಸ್ವರ್ಗಪ್ರಾಪ್ತಿ ಎಂಬ ಮಾತು ಇದನ್ನೇ ಪ್ರತಿಪಾದಿಸುತ್ತದೆ. ಆಸ್ತಿಕರು ಬಯಸುವ ಯಾವುದೇ ಯಜ್ಞಯಾಗಾದಿಗಳನ್ನು ಇಲ್ಲಿ ಯೋಗ್ಯವಾಗಿ ನಡೆಸಿಕೊಡಲಾಗುವುದು.

ಬ್ರಾಹ್ಮಣ ಭೋಜನ :

ಕ್ಷೇತ್ರಗಳಲ್ಲಿ ನಡೆಯುವ ವಿಧಿಯೊಂದಿಗೆ ಅತ್ಯಂತ ಪರಿಶುದ್ಧವಾಗಿ ಶ್ರದ್ಧೆಯಿಂದ ತಯಾರಿಸಿ ಕೊಡುವ ಬ್ರಹ್ಮಚಾರಿ ಆರಾಧನೆ, ದ್ವಾದಶಮೂರ್ತಿ ಆರಾಧನೆಗೆ ಬ್ರಾಹ್ಮಣ ಭೋಜನಕ್ಕೆ ಹಸ್ತೋದಕ ನೀಡಲು ಅವಕಾಶ ನೀಡಲಾಗುವುದು.

ಕುಕ್ಕೆ ಸುಜ್ಞಾನ ಮಂದಿರದಲ್ಲಿ ನಡೆಸುವ ಇತರ ಕಾರ್ಯಕ್ರಮಗಳು

ಶ್ರೀ ಗುರುಪರಂಪರಾ ಪೂಜೆ, ಬೃಹಸ್ಪತಿ ಶಾಂತಿ

ಗುರು ಅನುಗ್ರಹ

ಮಹಾಗಣಪತಿ ಹವನ, ಗಣಪತ್ಯಥರ್ವಶೀರ್ಷಹವನ, ಸತ್ಯ ವಿನಾಯಕ ವ್ರತ

ವಿಘ್ನ ನಿವಾರಣೆ, ಲಕ್ಷ್ಮೀಪ್ರಾಪ್ತಿ, ಅಭೀಷ್ಟ ಸಿದ್ಧಿ

ಆಯುಷ್ಯ ಹೋಮ ದೂರ್ವಾಹೋಮ, ಆಯುಷ್ಯವೃದ್ಧಿಗಾಗಿ ಸಂಧಿಶಾಂತಿಗಳು, ರವ್ಯಾದಿ ಪ್ರತ್ಯೇಕ ಶಾಂತಿಗಳು

ನವಗ್ರಹಾನುಗ್ರಹ, ಗ್ರಹದೋಷ ನವಗ್ರಹ ಶಾಂತಿ, ಪರಿಹಾರ

ಸರಸ್ವತೀ ಹವನ, ವಿದ್ಯಾಗಣಪತಿ ಹವನ, ಬಾಲಾಸರಸ್ವತೀ ಹವನ, ವಾಗ್ದೇವೀಹವನ, ಧಾರಣಾ ಸರಸ್ವತೀಹವನ, ಮೇಧಾ ದಕ್ಷಿಣಾಮೂರ್ತಿ ಹವನ

ಸಮಸ್ತ ವಿದ್ಯಾ, ಬುದ್ಧಿ ಪ್ರಾಪ್ತಿ

ದುರ್ಗಾ ತ್ರಿಕಾಲ ಪೂಜೆ, ಶ್ರೀಚಕ್ರ ಪೂಜೆ

ಸಕಲೈಶ್ವರ್ಯ ಪ್ರಾಪ್ತಿ

ಮನ್ಯುಸೂಕ್ತ, ಪ್ರತ್ಯಂಗಿರಾ ಹವನ

ಶತ್ರುಬಾಧಾ ನಿವಾರಣೆ

ಬಗಳಾಮುಖೀ ಹವನ

ಕೋರ್ಟು, ಕಛೇರಿಗಳಲ್ಲಿ ವಿಜಯಪ್ರಾಪ್ತಿ

ಶ್ರೀರಾಮ ಪಟ್ಟಾಭಿಷೇಕ, ರಾಮತಾರಕ ಹವನ ರಾಜಮಾತಂಗೀ ಹವನ, ಮಾತಂಗೀ ಹವನ ಅಶ್ವಾರೂಢ ಪಾರ್ವತೀ ಹವನ

ಸ್ಥಾನಮಾನ ಪ್ರಾಪ್ತಿ

ನಕ್ಷತ್ರೇಷ್ಟಿ

ನಕ್ಷತ್ರದೋಷ ಪರಿಹಾರ

ಪಂಚಮಾರಿಷ್ಟ ಶಾಂತಿ

ಪಂಚಮಸ್ಥ ಗ್ರಹದೋಷ ಪರಿಹಾರ

ದುರ್ಗಾಪೂಜೆ, ದುರ್ಗಾಹವನ, ಸಪ್ತಶತೀ ಪಾರಾಯಣ, ಚಂಡೀಹವನ, ಸೌಂದರ್ಯಲಹರೀ ಪಾರಾಯಣ-ಹವನ, ಲಲಿತಾ ಹವನ

ದುರಿತ ನಿವಾರಣೆ, ಸಂಕಷ್ಟ ಪರಿಹಾರ, ವಿಜಯಪ್ರಾಪ್ತಿ

ಅಭಯಂಕರ (ಕಾಲಮೃತ್ಯುಂಜಯ) ಶಾಂತಿ, ಮೃತ್ಯುಂಜಯ ಶಾಂತಿ,  ಮಹಾಮೃತ್ಯುಂಜಯ ಶಾಂತಿ, ದೂರ್ವಾಹವನ, ತ್ರ್ಯಂಬಕ ಶಾಂತಿ, ಧನ್ವಂತರೀ ಪೂಜೆ-ಹವನ, ಅರುಣ ಹವನ, ತೃಚಕಲ್ಪ-ಸೂರ್ಯನಮಸ್ಕಾರ, ಹೃದ್ರೋಗಹರ ಶಾಂತಿ, ಆಯುಷ್ಯ ಸೂಕ್ತ ಹವನ

ಆರೋಗ್ಯ ಪ್ರಾಪ್ತಿ, ಆರೋಗ್ಯ ವೃದ್ಧಿ, ಆಯುಷ್ಯ ವೃದ್ಧಿ, ಮೃತ್ಯುಬಾಧಾ ನಿವಾರಣೆ

ಭಾಗ್ಯ ಸೂಕ್ತ ಹವನ

ಸೌಭಾಗ್ಯ ಪ್ರಾಪ್ತಿ

ಸೀತಾರಾಮ ಕಲ್ಯಾಣೋತ್ಸವ, ರಾಮತಾರಕ ಹವನ, ಸ್ವಯಂವರ ಪಾರ್ವತೀಹವನ, ಪೂಜೆ, ಕುಜಶಾಂತಿ, ಐಂದ್ರಮಂತ್ರ ಹವನ, ಸುಂದರಕಾಂಡ ಪಾರಾಯಣ, ರಂಭಾವಿವಾಹ, ಕುಂಭವಿವಾಹ, ಅರ್ಕವಿವಾಹ

ವಿವಾಹಭಾಗ್ಯ ಸಿದ್ಧಿ

ಸಂತಾನಗೋಪಾಲಕೃಷ್ಣ ಹವನ, ಪುರುಷಸೂಕ್ತ ಹವನ, ಸುಬ್ರಹ್ಮಣ್ಯ ಹವನ, ಶ್ರೌತಪುತ್ರ ಕಾಮೇಷ್ಟಿ, ಕಾಮಧೇನುಹವನ

ಸಂತಾನ ಪ್ರಾಪ್ತಿ, ಸತ್ಸಂತತಿ ಸಿದ್ಧಿ, ಪುತ್ರ ಪ್ರಾಪ್ತಿ

ಕಾಳಸರ್ಪಶಾಂತಿ, ವಾಸುಕೀಹವನ, ರಾಹುಶಾಂತಿ.

ಸರ್ಪದೋಷ ನಿವಾರಣೆ, ಸಂತಾನ ಪ್ರತಿಬಂಧಕ ದೋಷ ನಿವಾರಣೆ, ಚರ್ಮವ್ಯಾಧಿ ನಿವಾರಣೆ

ಐಕಮತ್ಯ ಹವನ

ಪರಸ್ಪರ ವಿಶ್ವಾಸವೃದ್ಧಿ, ಐಕಮತ್ಯಸಿದ್ಧಿ

ಶನಿಶಾಂತಿ, ಶನಿಪೂಜೆ, ಅಶ್ವತ್ಥಪೂಜೆ, ಆಂಜನೇಯಹವನ, ಶಿವಪೂಜೆ, ಹನೂಮತ್ಪಂಚರತ್ನ ಹವನ

ಏಳೂವರೆ ಶನಿದೋಷ ಬಿಡುಗಡೆಗಾಗಿ ನಿವೃತ್ತಿ

ಧರಣೀ ಹವನ, ಭೂವರಾಹ ಹವನ

ಭೂಪ್ರಾಪ್ತಿಗಾಗಿ

ಗಾನವಿದ್ಯಾಪ್ರದಚಿತ್ರಸೇನಾಗಂಧರ್ವ ಹವನ

ಕಲಾಸಂವರ್ಧನೆಗಾಗಿ

ಗೋಸೂಕ್ತ ಹವನ, ಕಾಮಧೇನು ಹವನ, ಗೋಪೂಜೆ, ಗೋಪೂಜೆ, ಗೋದಾನ, ಅನ್ನದಾನ

ಗೋಸಮೃದ್ಧಿ, ಸರ್ವಕಾಮನಾ ಸಾಲಂಕೃತ ಸಿದ್ಧಿಗಾಗಿ

ಕಾರ್ತವೀರ್ಯಾರ್ಜುನ ಹವನ

ನಷ್ಟ ದ್ರವ್ಯ ಪ್ರಾಪ್ತಿಗಾಗಿ

ಮದನಮಹಾರ್ಣವ ಕರ್ಮವಿಪಾಕ ಪ್ರಾಯಶ್ಚಿತ್ತಗಳು

ಪೂರ್ವ ಜನ್ಮಾರ್ಜಿತ ಕರ್ಮದೋಷ ನಿವಾರಣೆಗೆ, ಮಹಾವ್ಯಾಧಿಗಳ ನಿವಾರಣೆ

ಚತುರ್ವೇದ ಪಾರಾಯಣ, ಹವನ, ವಿಷ್ಣು ಭಾಗವತ ಪಾರಾಯಣ, ರಾಮಾಯಣ ಪಾರಾಯಣ, ಭಗವದ್ಗೀತಾ ಪಾರಾಯಣ,
ಸಪ್ತಶತೀ (ಚಂಡೀ) ಪಾರಾಯಣ, ವಿವಿಧ ಪುರಾಣ ಪಾರಾಯಣ.

ಇಷ್ಟ ಪ್ರಾಪ್ತಿ, ಅನಿಷ್ಟ ನಿವಾರಣೆ

ಶ್ರೀ ಕ್ಷೇತ್ರಕ್ಕೆ ಬಂದಿರುವಾಗ ಸಂಧ್ಯಾವಂದನೆ, ಧ್ಯಾನ, ಜಪಾನುಷ್ಠಾನಕ್ಕೆ ವಿಶೇಷ ವ್ಯವಸ್ಥೆ ಇದೆ.
ಮದುವೆ ಇನ್ನಿತರ ಶುಭಸಮಾರಂಭಗಳಿಗೆ ಯೋಗ್ಯವಾದ ಕೊಠಡಿಗಳಿರುವ ಸುಸಜ್ಜಿತ ಸುಜ್ಞಾನ ಸಭಾಭವನ ಇದೆ.
ಸದಾ ನಗುಮೊಗದ ಜವಾಬ್ದಾರಿಯುತ ಸೇವೆ

Programmes

Following are the services (samskaras) rendered by us.

Anna Prashana:

Upanayanam:

Performance of upanayanam, in the abode of kukke subramanya, is meaningful for the reason that Lord subramanya or skanda is the deity of jnana or knowledge.

Marriage:

Proper facilities are provided and the marriage is performed according to the tradition.

Arrangements are also made for brahmana bojana if desired.

Yajnas:

Yajnas are the progress of the individual and the prosperity of the society. All types of yajnas are performed as desired by the devotee.