ಸುಜ್ಞಾನ ಮಂದಿರ

'ವೇದೋsಖಿಲೋ ಧರ್ಮಮೂಲಮ್ ಎಂಬುದು ಭಾರತೀಯರು ವೇದಗಳಿಗೆ ನೀಡಿದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ವೇದೋಕ್ತವಾದ ಯಜ್ಞಯಾಗಾದಿಗಳನ್ನು ಶಾಸ್ತ್ರೋಕ್ತವಾಗಿ ಮಾಡಿದಾಗ ಲೋಕಕಲ್ಯಾಣವಾಗುತ್ತದೆ. ಯಜ್ಞದಿಂದ ಮಳೆ, ಬೆಳೆ ಚೆನ್ನಾಗಿ ಬರುತ್ತದೆ ಎಂಬುದನ್ನು ಯಜ್ಞಾತ್ ಭವಂತಿ ಪರ್ಜನ್ಯಃ ಪರ್ಜನ್ಯಾತ್ ಅನ್ನ ಸಂಭವಃ ಎಂದು ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಪ್ರತಿಪಾದಿಸಿದ್ದಾನೆ.

ಯಜ್ಞಯಾಗಾದಿಗಳನ್ನು ಆಚರಿಸುವುದಕ್ಕೆ ಸುಸಂಸ್ಕೃತರಾದ ವ್ಯಕ್ತಿಗಳು ಬೇಕು. ಸುಸಂಸ್ಕೃತರಾಗುವುದಕ್ಕೆ ಸಂಸ್ಕಾರ ಬೇಕು. ಸಂಸ್ಕಾರಗಳನ್ನು ಕೊಡಿಸುವ ಕೊಡುವ ಯೋಗ್ಯ ವ್ಯಕ್ತಿಗಳೂ ಜಾಗಗಳೂ ಬೇಕು. ಈ ದೃಷ್ಟಿಯಿಂದ ಕರ್ನಾಟಕದ ಸುಪ್ರಸಿದ್ಧವಾದ, ದೇವಾಲಯಗಳ ನಗರವೆಂದೇ ಖ್ಯಾತವಾದ ಜ್ಞಾನಶಕ್ತಿ ಕಾರಣನಾದ ಸುಬ್ರಹ್ಮಣ್ಯ ನೆಲೆನಿಂತ ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಮನುಷ್ಯನಿಗೆ ಸಿಗಬೇಕಾದ ಸುಜ್ಞಾನ ಮಂದಿರ ನೆಲೆನಿಂತಿದೆ.

ಸುಜ್ಞಾನ ಮಂದಿರವು 2013ನೇ ವರ್ಷದ ನಂದನನಾಮ ಸಂವತ್ಸರದಲ್ಲಿ ಶ್ರೀಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾದಿಗಳಿಗೆ ಉಪನಯನ, ಪರಿಹಾರ ಹೋಮ, ಪೌಷ್ಠಿಕ, ಶಾಂತಿಹೋಮಾದಿಗಳನ್ನು ಆಚರಿಸಲೆಂದೇ ಪ್ರಾರಂಭವಾಯಿತು.

ಸಂಸ್ಕಾರಗಳನ್ನು ಹೋಮಾದಿಗಳನ್ನು ಆಚರಿಸಲು ಅಸಾಧ್ಯವೆಂದೇ ನಂಬಿರುವ ಈ ಕಾಲದಲ್ಲಿ ಶಾಸ್ತ್ರೋಕ್ತವಾಗಿ ಕರ್ಮಾದಿಗಳನ್ನು ನಡೆಸಲು ಈ ಸಂಸ್ಥೆ ಕಟಿಬದ್ಧವಾಗಿದೆ.

SUJANA MANDIRA

Veda means knowledge or Jnana. Naturally hindus give supreme importance to Vedas in their way of life. It is believed that prosperity and peace of mind can be attained by performing vedic samskaras. Hence the importance of giving samskaras, like annaprashana, upanayanam, and so on.

Sujnana Mandira was founded in the year 2013, with the noble purpose of providing knowledge (jnana), through giving samskaras as found in vedas. Sujnana mandira is the located in the holy temple place of kukke subramanya, a few yards away from the Adi subramanya temple.